== ಶೂಟಿಂಗ್ ಕ್ರೀಡಾ ಪಟು == ಅಯೋನಿಕಾ ಪಾಲ್ (1992 ರ ಸೆಪ್ಟೆಂಬರ್ 23 ರಂದು ಜನನ) 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಸ್ಪರ್ಧೆ ಮಾಡಿದ ಭಾರತೀಯ ಶೂಟರ್. ಅವರು ಮುಂಬಯಿಯ ಚೆಂಬೂರು ಸ್ವಾಮಿ ವಿವೇಕಾನಂದರ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ.ಅಯೋನಿಕಾ ಪಾಲ್ ಒಮ್ಮೆ ಅತ್ಯುತ್ತಮ ಈಜುಗಾರರಾಗಿದ್ದರು. ಆದರೆ ನಿಧಾನವಾಗಿ ಅವರು ರೈಫಲ್ ಶೂಟಿಂಗ್` ನಲ್ಲಿ ಆಸಕ್ತಿ ಬೆಳಸಿಕೊಂಡರು. 2014 ರ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್`ನಲ್ಲಿ ಬೆಳ್ಳಿ ಪದಕ ಗಳಿಸಿದರು . ಅವರು ಹಿಂದೆ ಐಎಸ್ಎಸ್ಎಫ್ ವಿಶ್ವ ಕಪ್ 2014 ರಲ್ಲಿ ಸ್ಲೊವೇನಿಯಾದಲ್ಲಿ ಕಂಚಿನ ಗೆದ್ದಿದ್ದರು. == ಐಎಸ್ಎಸ್ಎಫ್ ವಿಶ್ವ ಕಪ್ ಪದಕ ವಿವರ == ದಿ.29-1-2016 ರಂದು ದೆಹಲಿಯಲ್ಲಿ ನೆಡೆ ದಶೂಟಿಂಗ್`ವಿಭಾಗದಲ್ಲಿ ಏಷ್ಯಾದ ಒಲಂಪಿಕ್ ಕ್ರೀಡಾಪಟು ಆಯ್ಕೆಯ ಸ್ಪರ್ಧೆಯಲ್ಲಿ ಅಯೋನಿಕಾ ಅವರು ಇರಾನ್`ನ ನಜಮೇಹ್ ಖೇದ್ಮತಿ ಜೊತೆ ಟೈ ಯಲ್ಲಿ ಸ್ವಲ್ಪದರಲ್ಲಿ ಚಿನ್ನದ ಪದಕ ಕಳೆದುಕೊಂಡರು. ಅಯೋನಿಕಾ ಮತ್ತು . ನಜಮೇಹ್ ಖೇದ್ಮತಿ ಇಬ್ಬರೂ 205,9 ಒಂದೇ ಸ್ಕೋರ್ ಪಡೆದಿದ್ದರು. ನಂತರದ ಒಂದು ಶಾಟ್ ನಂತರ ನಜಮೇಹ್ ವಿಜೇತರು ಎಂದು ನಿರ್ಧರಿಸಲಾಯಿತು.ಅವರದು 10.1 ಅಂಕ; ಅಯೋನಿಕಾ ಮಾತ್ರ 9.9 ಕ್ಕೆ ತಲುಪಿದರು. ಆರಂಭಿಕ 20 ಶೂಟಿನ ಮುನ್ನಡೆಯ ನಾಯಕಿ ಪೂಜಾ ಘಾಟ್ಕರ್` ಕಂಚಿನ ಪದಕ ಗೆದ್ದುಕೊಂಡರು. ಫೋಟೊ:[[೧]] == ನೋಡಿ == ಹೀನಾ ಸಿಧು - ಭಾರತದ ನಂ.೧ ಶೂಟರ್ == ಉಲ್ಲೇಖ ==